Submit your work, meet writers and drop the ads. Become a member
Nov 2020
ಪ್ರತಿಯೊಂದಕು ಇದೆ ಹುಟ್ಟು,
ಪ್ರತಿಯೊಂದಕು ಸಾವು.
ನಡುವಲ್ಲಿ ಖುಷಿಯಾಗಿ,
ಬದುಕಿಹೆವು ನಾವು.

ನಂಬಿಕೆಗಳ ಸಾಗರದಿ ಸಾವಿರಾರು ದೋಣಿಗಳು,
ಆದಿ-ಅಂತ್ಯಗಳೆಮಗೆ ಅರಿಯದಾ ನಿಲುವುಗಳು.
ಕೊನೆ ಕಾಣದಾಗಸದ ಇತಿ-ಮಿತಿಗಳನಳೆಯಲು,
ಕಣ್ಮುಚ್ಚಿ ಸಾಗಿಹೆವು ಹುಟ್ಟಿರದಾ ದೋಣಿಯೋಳು.

ನಿನ್ನದೇ ಕವನವಿದು,
ನಿನ್ನದೇ ಸಾಲು.
ಬೇರೊಬ್ಬರ ಪದಗಳಿಗೆ,
ಏತಕಿದೆ ಪಾಲು.

ಚಿಂತಿಸದೆ ಸಾಗುತಿರು ನಿನ್ನದೇ ದಾರಿಯೊಳು,
ತಲುಪುವೆ ನೀ ನಿನ್ನೊಳಗೆ ಕೊನೆಕಾಣದ ತೀರವನು.
Everything has a beginning
Everything has an end
We must live happily in the median

Thousands of boats amidst the ocean of  beliefs
The start and the end for us, are unknown stands
To measure the endless frontiers of the sky
Sailing blind in the bow less boat

Yours, is this poem! Yours, are these lines! Why does other's words even share a part!

Without worrying, Continue the journey of life in your own way
Within yourself, you'll reach an unseen endless shore.

YouTube: https://youtu.be/9UdEBXk6_ac
Written by
RaO
Please log in to view and add comments on poems